ಡಬ್ ಸ್ಮ್ಯಾಶ್ ಸ್ಟಾರ್'ಗಳಿಗೆ ಕೂಡಿ ಬಂತು ಕಂಕಣ ಭಾಗ್ಯ | Filmibeat Kannada

2017-11-15 1

'ಡಬ್ ಸ್ಮ್ಯಾಶ್' ಮೂಲಕ ದೊಡ್ಡ ಜನಪ್ರಿಯತೆಗಳಿಸಿಕೊಂಡಿದ್ದ ಅಲ್ಲು ರಘು ಮತ್ತು ಸುಷ್ಮಿತಾ ಈಗ ಮದುವೆ ಆಗಿದ್ದಾರೆ. ಆದರೆ ಅದು ರಿಯಲ್ ಆಗಿ ಅಲ್ಲ... ಸಿನಿಮಾದಲ್ಲಿ ಮಾತ್ರ.! ವಿಭಿನ್ನವಾದ 'ಡಬ್ ಸ್ಮ್ಯಾಶ್'ಗಳನ್ನು ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಅಲ್ಲು ರಘು ಮತ್ತು ಸುಷ್ಮಿತಾಗೆ ಇದೀಗ ಸಿನಿಮಾ ಅವಕಾಶ ಸಿಕ್ಕಿದೆ. ಈಗ ಅದೇ ಚಿತ್ರದ ಚಿತ್ರೀಕರಣ ಕೂಡ ಶುರುವಾಗಿದೆ. ಈ ಹೊಸ ಸಿನಿಮಾದಲ್ಲಿ ಇರುವ ಮದುವೆ ದೃಶ್ಯ ಶೂಟಿಂಗ್ ಸದ್ಯ ನಡೆಯುತ್ತಿದೆ. ದೃಶ್ಯದಲ್ಲಿ ಅಲ್ಲು ರಘು ಮತ್ತು ಸುಷ್ಮಿತಾ... ಇಬ್ಬರೂ ನವ ದಂಪತಿಗಳಾಗಿ ಮಿಂಚಿದ್ದಾರೆ.ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರ ಮದುವೆ ಫೋಟೋ ಹರಿದಾಡುತ್ತಿದೆ. ಇನ್ನು ಸಿನಿಮಾದ ಜೊತೆಗೆ 'ಬರ್ತಡೇ ಕಿಕ್' ಎನ್ನುವ ಹಾಡಿನಲ್ಲಿಯೂ ಅಲ್ಲು ರಘು ಮತ್ತು ಸುಷ್ಮಿತಾ ಕಾಣಿಸಿಕೊಳ್ಳುತ್ತಿದ್ದಾರೆ.'ಡಬ್ ಸ್ಮ್ಯಾಶ್' ಮೂಲಕ ದೊಡ್ಡ ಜನಪ್ರಿಯತೆಗಳಿಸಿಕೊಂಡಿದ್ದ ಅಲ್ಲು ರಘು ಮತ್ತು ಸುಷ್ಮಿತಾ ಈಗ ಮದುವೆ ಆಗಿದ್ದಾರೆ. ಆದರೆ ಅದು ರಿಯಲ್ ಆಗಿ ಅಲ್ಲ... ಸಿನಿಮಾದಲ್ಲಿ ಮಾತ್ರ.! ವಿಭಿನ್ನವಾದ 'ಡಬ್ ಸ್ಮ್ಯಾಶ್'ಗಳನ್ನು ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಅಲ್ಲು ರಘು ಮತ್ತು ಸುಷ್ಮಿತಾಗೆ ಇದೀಗ ಸಿನಿಮಾ ಅವಕಾಶ ಸಿಕ್ಕಿದೆ. ಈಗ ಅದೇ ಚಿತ್ರದ ಚಿತ್ರೀಕರಣ ಕೂಡ ಶುರುವಾಗಿದೆ. ಈ ಹೊಸ ಸಿನಿಮಾದಲ್ಲಿ ಇರುವ ಮದುವೆ ದೃಶ್ಯ ಶೂಟಿಂಗ್ ಸದ್ಯ ನಡೆಯುತ್ತಿದೆ. ದೃಶ್ಯದಲ್ಲಿ ಅಲ್ಲು ರಘು ಮತ್ತು ಸುಷ್ಮಿತಾ... ಇಬ್ಬರೂ ನವ ದಂಪತಿಗಳಾಗಿ ಮಿಂಚಿದ್ದಾರೆ.ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರ ಮದುವೆ ಫೋಟೋ ಹರಿದಾಡುತ್ತಿದೆ. ಇನ್ನು ಸಿನಿಮಾದ ಜೊತೆಗೆ 'ಬರ್ತಡೇ ಕಿಕ್' ಎನ್ನುವ ಹಾಡಿನಲ್ಲಿಯೂ ಅಲ್ಲು ರಘು ಮತ್ತು ಸುಷ್ಮಿತಾ ಕಾಣಿಸಿಕೊಳ್ಳುತ್ತಿದ್ದಾರೆ.